ಜಿನೋಬಿಯ 2

	ಎರಿಕೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯ. ಪಾಲ್ಮೈರದ ರಾಣಿಯಾಗಿದ್ದ ಜಿûನೋಬಿಯಾಳ ಜ್ಞಾಪಕಾರ್ಥವಾಗಿ ಇದಕ್ಕೆ ಈ ಹೆಸರು ಕೊಡಲಾಗಿದೆ. ಇದು ಅಮೆರಿಕದ ಮೂಲವಾಸಿ. ಜಿûನೋಬಿಯ 1-1.5 ಮೀ. ಎತ್ತರಕ್ಕೆ ಬೆಳೆಯುವ ಪೊದೆ. ಎಲೆಗಳು ಸರಳ. ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಇವಕ್ಕೆ ಚಿಕ್ಕ ತೊಟ್ಟೂ ದಂತಿತ ಇಲ್ಲವೆ ನಯವಾದ ಅಂಚೂ ಇವೆ. ಹೂಗಳು ಅಕ್ಷಸ್ಥ ರೆಸೀóಮ್ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗಳ ಬಣ್ಣ ಬಿಳಿ. ಪ್ರತಿಹೂವಿನಲ್ಲಿ 5 ಪುಷ್ಪ ಪತ್ರಗಳು. 5 ದಳಗಳು, 10 ಕೇಸರಗಳು, 5 ಕಾರ್ಪೆಲುಗಳಿಂದ ಕೂಡಿದ ಉಚ್ಚ ಸ್ಥಾನದ ಅಂಡಾಶಯ ಇದೆ ದಳಗಳು ಸಂಯುಕ್ತ ಮಾದರಿಯವು ದಳ ಸಮೂಹದ ಆಕಾರ ಗಂಟೆಯಂತೆ ಫಲ ಸಂಪುಟ ಮಾದರಿಯದು. ಒಳಗೆ ಅಸಂಖ್ಯಾತ ಬೀಜಗಳಿವೆ. ಜಿûನೋಬಿಯವನ್ನು ಬೀಜಗಳಿಂದಲೂ ಕಾಂಡತುಂಡುಗಳಿಂದಲೂ ವೃದ್ಧಿ ಮಾಡಬಹುದು. ಇದರ ಬೇಸಾಯಕ್ಕೆ ಮರಳುಮಿಶ್ರಿತ ಗೋಡು ಅಥವಾ ಸಸ್ಯಾಂಗಾರದ ಮಣ್ಣು ಸೂಕ್ತವಾದದ್ದು. ಕಾಂಡತುಂಡುಗಳನ್ನು ಸೆಪ್ಟೆಂಬರ್, ಅಕ್ಟೋಬರ್, ಮಾರ್ಚ್ ಅಥವಾ ಏಪ್ರಿಲ್ ತಿಂಗಳುಗಳಲ್ಲಿ ನೆಡಬಹುದು. ಜಿûನೋಬಿಯಾದ ಪ್ರಭೇದಗಳಲ್ಲಿ ಪಲ್‍ವೆರುಲೆಂಟ ಎಂಬುದು ಅತಿ ಮುಖ್ಯವಾದ್ದು. 
(ಎಂ.ಎಚ್.ಎಂ.)
ಪರಿಷ್ಕರಣೆ : ಹರೀಶ್ ಭಟ್
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ